ಉಡುಪಿ: ಪೊಲೀಸ್ ಇಲಾಖೆಯ ಮ್ಯಾರಥಾನ್ ವೇಳೆ ಹೃದಯಾಘಾತ; ಕುಂದಾಪುರ ಗ್ರಾಮಾಂತರ ಎಸ್ಐ ನಾಸೀರ್ ಹುಸೇನ್ ಸಾವು
ಉಡುಪಿಯಲ್ಲಿ ನಡೆದ ಪೊಲೀಸ್ ಇಲಾಖೆಯ ಮ್ಯಾರಥಾನ್ ವೇಳೆ ಕುಂದಾಪುರ ಗ್ರಾಮಾಂತರ ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸೈಬರ್ ಜಾಗೃತಿಗಾಗಿ ಆಯೋಜಿಸಲಾಗಿದ್ದ ಈ ಓಟದ ವೇಳೆ ಹೃದಯಾಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

