ಉಡುಪಿ: ನಿಟ್ಟೂರು ಸಮೀಪ ಕಾಂಪೌಂಡ್ ಗೋಡೆಗೆ ಸ್ಕೂಟರ್ ಡಿಕ್ಕಿ; ತಾಯಿ ಸಾವು, ಮಗನಿಗೆ ಗಂಭೀರ ಗಾಯ
ನಿಟ್ಟೂರು ಬಬ್ಬುಸ್ವಾಮಿ ದೈವಸ್ಥಾನದ ಬಳಿ ಸ್ಕೂಟರ್ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ಕಟಪಾಡಿಯ ಹೆಲನ್ ಸೋನ್ಸ್ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರ ಮಗ ಶರ್ವಿನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

