ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನಿಸಿದ ಯುವಕನ ರಕ್ಷಣೆ
ಇನ್ನಂಜೆ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನಿಸಿದ ಕೇರಳ ಮೂಲದ ಸಹಾದ್ ಎಂಬ ಯುವಕನನ್ನು ಟಿಟಿಇ ಬಾಬು ಮತ್ತು ತಂಡದವರು ರಕ್ಷಿಸಿದ್ದಾರೆ. ಮಾನಸಿಕ ಅಸ್ವಸ್ಥನಾಗಿರುವ ಯುವಕನನ್ನು ಸದ್ಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

