ಉಡುಪಿ ರೈಲು ನಿಲ್ದಾಣ: ಮನೆಯಿಂದ ಓಡಿಬಂದಿದ್ದ ಐವರು ಅಪ್ರಾಪ್ತ ಬಾಲಕರ ರಕ್ಷಣೆ
ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಇಲ್ಲದೆ ಸಂಶಯಾಸ್ಪದವಾಗಿ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ಐವರು ಅಪ್ರಾಪ್ತ ಬಾಲಕರನ್ನು ಟಿಟಿಇ ಸವಿತಾ ಶೆಟ್ಟಿ ಮತ್ತು ಆರ್‌ಪಿಎಫ್ ಸಿಬ್ಬಂದಿ ಉಡುಪಿಯಲ್ಲಿ ರಕ್ಷಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ.

