ಉಡುಪಿ: ರೌಡಿ ಚರಣ್‌ರಾಜ್‌ ಗೂಂಡಾ ಕಾಯ್ದೆಯಡಿ ಬಂಧನ; ಶಿವಮೊಗ್ಗ ಜೈಲಿಗೆ ರವಾನೆ

ಕೊಲೆಯತ್ನ, ಹಲ್ಲೆ ಹಾಗೂ ಡ್ರಗ್ಸ್ ಸಾಗಾಟ ಸೇರಿದಂತೆ ಒಟ್ಟು 10 ಪ್ರಕರಣಗಳನ್ನು ಎದುರಿಸುತ್ತಿದ್ದ ಉಡುಪಿ ನಗರ ಠಾಣಾ ವ್ಯಾಪ್ತಿಯ ರೌಡಿ ಚರಣ್ ರಾಜ್ (29) ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.