ಉಡುಪಿ

ಉಡುಪಿ: ಎಸ್ ಡಿ ಪಿ ಐ ವತಿಯಿಂದ ಜಿಲ್ಲೆಯಾದ್ಯಂತ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ.

ಉಡುಪಿ: SDPI ಆಯೋಜನೆಯಲ್ಲಿ “ಸ್ವಾತಂತ್ರ್ಯವನ್ನು ರಕ್ಷಿಸೋಣ, ರಾಷ್ಟ್ರವನ್ನು ಉಳಿಸೋಣ” ಘೋಷಣೆಯೊಂದಿಗೆ 79ನೇ ಸ್ವಾತಂತ್ರ್ಯ ದಿನಾಚರಣೆ. ರಜಾಕ್ ವೈ.ಎಸ್. ಧ್ವಜಾರೋಹಣ, ಅಶ್ರಫ್ ಭಾವ ಮತ್ತು ರಹೀಮ್ ಸಂದೇಶ.

ಉಡುಪಿ: ಎಸ್ ಡಿ ಪಿ ಐ ವತಿಯಿಂದ ಜಿಲ್ಲೆಯಾದ್ಯಂತ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ.

ಉಡುಪಿ: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು “ಸ್ವಾತಂತ್ರ್ಯವನ್ನು ರಕ್ಷಿಸೋಣ ರಾಷ್ಟ್ರವನ್ನು ಉಳಿಸೋಣ” ಎಂಬ ಘೋಷಣೆಯೊಂದಿಗೆ ಧ್ವಜಾರೋಹಣ ರ್ಯಾಲಿ ಹಾಗೂ ಸಭಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು.

ಉಡುಪಿಯಲ್ಲಿರುವ ಪಕ್ಷದ ಜಿಲ್ಲಾ ಕಛೇರಿ, ಕಾಪು ಕ್ಷೇತ್ರ ಸಮಿತಿ ಕಚೇರಿ, ಬೈಂದೂರು ಕ್ಷೇತ್ರ ಸಮಿತಿ ಕಚೇರಿ, ಹೂಡೆ, ಉಚ್ಚಿಲ, ಪಡುಬಿದ್ರಿ, ಕಂಡ್ಲೂರ್, ಶೀರೂರ್, ಕಟಪಾಡಿ ಹಾಗು ಅಹಮದಿ ಮೊಹಲ್ಲಾದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಉಡುಪಿಯಲ್ಲಿರುವ ಪಕ್ಷದ ಜಿಲ್ಲಾ ಕಛೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಜಾಕ್ ವೈ ಎಸ್ ರವರು ಧ್ವಜಾರೋಹನವನ್ನು ನೆರವೇರಿಸಿದರು. ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಭಾವ ಹಾಗೂ ಉಪಾಧ್ಯಕ್ಷರಾದ ರಹೀಮ್ ಆದಿಉಡುಪಿ ಯವರು ಸ್ವಾತಂತ್ರ್ಯ ದಿನದ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ಹಾಗೂ ಪಕ್ಷದ ಜಿಲ್ಲಾ ಮತ್ತು ಕ್ಷೇತ್ರ ಸಮಿತಿ ನಾಯಕರುಗಳು ಮತ್ತು ಸದಸ್ಯರು ಹಾಗೂ ವಿಮೆನ್ ಇಂಡಿಯಾ ಮೂಮೆಂಟ್ನ ಸದಸ್ಯರು ಉಪಸ್ಥಿತರಿದ್ದರು.

ಈ ಲೇಖನವನ್ನು ಹಂಚಿಕೊಳ್ಳಿ