ಎಸ್‌ಐಆರ್ 2026: ಉಡುಪಿ ಜಿಲ್ಲೆಯಲ್ಲಿ 3,02,848 ಗಣತಿ ನಮೂನೆ ವಿತರಣೆ
ಉಡುಪಿ ಜಿಲ್ಲೆಯಲ್ಲಿ ಎಸ್‌ಐಆರ್-2026 ಮತದಾರರ ಪಟ್ಟಿ ಪರಿಷ್ಕರಣೆ ಚುರುಕಾಗಿದ್ದು, ಜುಲೈ 4ರವರೆಗೆ 3,02,848 ಗಣತಿ ನಮೂನೆಗಳನ್ನು ವಿತರಿಸಿ ಶೇ. 28.46 ಪ್ರಗತಿ ಸಾಧಿಸಲಾಗಿದೆ. ಪ್ರಕ್ರಿಯೆಯ ಮೇಲ್ವಿಚಾರಣೆಗೆ 119 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಫೆಸಿಲಿಟೇಷನ್ ಸೆಂಟರ್‌ಗಳ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಡಿಸಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

