ಉಡುಪಿ: ವಿಮೆನ್ ಇಂಡಿಯಾ ಮೂಮೆಂಟ್ ಉಡುಪಿ ಜಿಲ್ಲೆಯ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು “ಮಹಿಳಾ ಭದ್ರತೆಯೇ ಸ್ವಾತಂತ್ರ್ಯದ ಅಳತೆಗೋಲು” ಎಂಬ ಘೋಷಣೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಆಚರಿಸಲಾಯಿತು. ಜಿಲ್ಲೆಯ ಉಡುಪಿ, ಹೂಡೆ, ಆದಿಉಡುಪಿ, ಕಂಡ್ಲೂರ್,ಗಂಗೊಳ್ಳಿ, ಕಾಪು, ಕೊಂಬಗುಡ್ಡೆ, ಮಲ್ಪೆ, ಮೂಳೂರು ಹಾಗೂ ಕುಂದಾಪುರದಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

“ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಹಾಗೂ ದೇಶದಲ್ಲಿ ಪ್ರಸಕ್ತ ಮಹಿಳೆಯರ ಸ್ಥಿತಿಗತಿ” ಎನ್ನುವ ವಿಷಯದಲ್ಲಿ ತರಗತಿಗಳನ್ನು ಏರ್ಪಡಿಸಲಾಯಿತು. ಅಲ್ಲದೆ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷರಾದ ನಾಝಿಯಾ ನಸ್ರುಲ್ಲ, ಪ್ರಧಾನ ಕಾರ್ಯದರ್ಶಿ ರಹಮತುಣ್ಣೀಸ,ಉಪಾಧ್ಯಕ್ಷರಾದ ನಸೀಂ ಮುಬೀನ್, ಕ್ಷೇತ್ರ ಸಮಿತಿ ನಾಯಕಿಯರಾದ ಹಸೀನಾ ಉಡುಪಿ, ಫರ್ಜಾನಾ ಕಾಪು, ನಸೀಮಾ ಫಾತಿಮಾ, ನೌಶೀನ್ ಕಂಡ್ಲೂರ್, ನಾಸಿರ ಕುಂದಾಪುರ, ಆಯಿಷಾ ನಹ್ರೀನ್ ಗಂಗೊಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.