ಉದ್ಯಾವರ: ಪಾಪನಾಶಿನಿ ಸೇತುವೆಯಿಂದ ನದಿಗೆ ಜಿಗಿದು ಯುವಕ ಆತ್ಮಹತ್ಯೆ

ಉದ್ಯಾವರ ಪಿತ್ರೋಡಿಯ ಹರ್ಷಿತ್ ಶೆಟ್ಟಿ (28) ಮಂಗಳವಾರ ಪಾಪನಾಶಿನಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ರಿಕೆಟ್ ಆಡಲು ಹೋದವರು ನಾಪತ್ತೆಯಾಗಿದ್ದು, ಸೇತುವೆ ಮೇಲೆ ಬೈಕ್ ಪತ್ತೆಯಾಗಿತ್ತು. ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಸ್ಥಳೀಯರು ನಡೆಸಿದ ಹುಡುಕಾಟದ ಬಳಿಕ ಸಂಜೆ ಮೃತದೇಹ ಪತ್ತೆಯಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

!!

ನೀವು ಸಂಕಟದಲ್ಲಿದ್ದರೆ ಅಥವಾ ಆತ್ಮಹತ್ಯೆಯ ಪ್ರವೃತ್ತಿಯನ್ನು ಹೊಂದಿದ್ದರೆ, ದಯವಿಟ್ಟು 24/7 ಸಹಾಯವಾಣಿಗಳಾದ KIRAN 1800-599-0019 ಅಥವಾ ಆರೋಗ್ಯ ಸಹಾಯವಾಣಿ 104 ಅನ್ನು ಸಂಪರ್ಕಿಸಿ.