ಉತ್ತರ ಕನ್ನಡ: ಮನೆ ಕಳ್ಳತನದ ಆರೋಪಿ ಬಂಧನ; ಚಿತ್ತಾಕುಲ ಪೊಲೀಸರ ಕಾರ್ಯಾಚರಣೆಯಿಂದ 48 ಗ್ರಾಂ ಚಿನ್ನ ವಶ

ಉತ್ತರ ಕನ್ನಡ: ಮಾಜಾ ಗಾಬಿತವಾಡದ ಮನೆ ಕಳ್ಳತನ ಪ್ರಕರಣದಲ್ಲಿ ರಮೇಶ್ ಮಹದೇವ ಮೇಥಾರ್ ಬಂಧನ. ರೂ.4.8 ಲಕ್ಷ ಮೌಲ್ಯದ 48 ಗ್ರಾಂ ಚಿನ್ನ ವಶ. ಚಿತ್ತಾಕುಲ ಪೊಲೀಸರ ತ್ವರಿತ ಕಾರ್ಯ; BNS ಕಾಯ್ದೆಯಡಿ ಪ್ರಕರಣ.

ಉತ್ತರ ಕನ್ನಡ: ಮನೆ ಕಳ್ಳತನದ ಆರೋಪಿ ಬಂಧನ; ಚಿತ್ತಾಕುಲ ಪೊಲೀಸರ ಕಾರ್ಯಾಚರಣೆಯಿಂದ 48 ಗ್ರಾಂ ಚಿನ್ನ ವಶ

ಕಾರವಾರ, ಸೆಪ್ಟೆಂಬರ್ 17, 2025: ಕಾರವಾರ ತಾಲೂಕಿನ ಮಾಜಾ ಗಾಬಿತವಾಡದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಚಿತ್ತಾಕುಲ ಪೊಲೀಸರು ಬಂಧಿಸಿ, ರೂ.4,80,000 ಮೌಲ್ಯದ 48 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆಯಲ್ಲಿ ಪೊಲೀಸರ ತ್ವರಿತ ಕಾರ್ಯವು ಶ್ಲಾಘನೀಯವಾಗಿದೆ.

ಆಗಸ್ಟ್ 7, 2025ರಂದು ಮಧ್ಯಾಹ್ನ 1:00ರಿಂದ 6:00ರ ನಡುವೆ, ಕಾರವಾರ ತಾಲೂಕಿನ ಮಾಜಾ ಗಾಬಿತವಾಡದಲ್ಲಿರುವ ಪಿರ್ಯಾದಿದಾರರ ಮನೆಯ ಮುಖ್ಯ ಬಾಗಿಲಿಯ ಚೀಲಕವನ್ನು ತೆಗೆದು ಒಳಹೊಕ್ಕ ಕಳ್ಳರು, ದೇವರಕೊಣೆಯ ಕಬ್ಬಿಣದ ಅಲಮಾರಿಯ ಲಾಕ್ ಅನ್ನು ಒಡೆದು ಬಂಗಾರದ ವಡವೆಗಳನ್ನು ಕದಿದುಕೊಂಡು ಹೋಗಿದ್ದರು. ಈ ಘಟನೆಯ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 51/2025ರಡಿಯಲ್ಲಿ ಕಲಂ 331(3), 305 BNS ಪ್ರಕಾರ ಪ್ರಕರಣ ದಾಖಲಾಗಿತ್ತು.

ತನಿಖೆಯಲ್ಲಿ ಆರೋಪಿಯಾಗಿ ರಮೇಶ್ ಮಹದೇವ ಮೇಥಾರ್ ಗುರುತಿಸಲ್ಪಟ್ಟು, ಅವನನ್ನು ದಸ್ತಗಿರಿ ಮಾಡಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧನದ ಸಂದರ್ಭದಲ್ಲಿ ರೂ.4,80,000 ಮೌಲ್ಯದ 48 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ. ಮತ್ತು ಜಗದೀಶ ಎಂ., ಕಾರವಾರ ಉಪವಿಭಾಗ ಪೊಲೀಸ್ ಉಪಾಧಿಕ್ಷಕ ಗಿರೀಶ್.ಎಸ್. ವಿ., ತನಿಖಾಧಿಕಾರಿ ಪ್ರಕಾಶ್ ದೇವಾಡಿಗ (ಪೊಲೀಸ್ ವೃತ್ತ ನಿರೀಕ್ಷಕ, ಕದ್ರಾ ವೃತ್ತ), ಸುನೀತಾ ಕಡವಡಕರ (ಎ.ಎಸ್.ಐ), ರಾಜೇಶ್ ನಾಯ್ಕ್ (ಸಿ.ಎಚ್.ಸಿ 1414), ವಿನಯ್ ಕಾಣಕೋಣಕರ್ (ಸಿ.ಪಿ.ಸಿ 703), ಅಜಿತ್ ಈರು ಗೋವಕರ್ (ಸಿ.ಪಿ.ಸಿ-1046), ಪ್ರವಿಣ್ ಗವಾಣಿಕರ್ (ಸಿ.ಪಿ.ಸಿ 1142, ಚಿತ್ತಾಕುಲ ಠಾಣೆ), ಕುಮಾರೇಶ್ ಆರ್. ಲಮಾಣಿ (ಸಿ.ಪಿ.ಸಿ 924), ಸತೀಶ್ ಗಾಂವಕರ್ (ಹೆ.ಸಿ 1343), ಮತ್ತು ಜಗದೀಶ್ (ಎ.ಪಿ.ಸಿ 503, ಜೀಪ್ ಚಾಲಕ) ಭಾಗವಹಿಸಿದ್ದಾರೆ.

ಈ ತ್ವರಿತ ಪತ್ತೆಗೆ ಭಾಗವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು ಪ್ರಶಂಸಿಸಿ ಅಭಿನಂದಿಸಿದೆ.

ಈ ಲೇಖನವನ್ನು ಹಂಚಿಕೊಳ್ಳಿ