ಕುಂದಾಪುರ: ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗೆ ರಾಜ್ಯದಿಂದ ವಂಡ್ಸೆ ಗ್ರಾಮ ಪಂಚಾಯತ್ ನಾಮನಿರ್ದೇಶನ; ಕೇಂದ್ರ ತಂಡದಿಂದ ಪರಿಶೀಲನೆ
ಕೇಂದ್ರದ “ಆರೋಗ್ಯಕರ ಗ್ರಾಮ ಪಂಚಾಯತ್” ಪ್ರಶಸ್ತಿಗೆ ಕರ್ನಾಟಕದಿಂದ ವಂಡ್ಸೆ ಪಂಚಾಯತ್ ನಾಮನಿರ್ದೇಶನಗೊಂಡಿದೆ. ದೇಶದ 2.68 ಲಕ್ಷ ಪಂಚಾಯತ್‌ಗಳಲ್ಲಿ ಅಂತಿಮ 55ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಂಡ್ಸೆಗೆ ಕೇಂದ್ರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

