ಶಿರೂರು: ಬೈಕ್‌ವೊಂದು ಡಿಕ್ಕಿಯಾಗಿ ಲಾರಿ ಹರಿದು ಯುವಕ ದುರ್ಮರಣ ಹೊಂದಿದ ಘಟನೆ ಶುಕ್ರವಾರ ರಾತ್ರಿ ಶಿರೂರು ಗಡಿಭಾಗದ ಪೊಲೀಸ್ ಚೆಕ್‌ಪೋಸ್ಟ್ ಬಳಿ ನಡೆದಿದೆ.
ಎನಿದು ಘಟನೆ:
ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಗಣೇಶ ಚೌತಿ ಕಾರ್ಯಕ್ರಮ ಮುಗಿಸಿ ಊಟಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ.ಶಿರೂರು ಹಡವಿನಕೋಣೆ ನಿವಾಸಿ ಗೋಪಾಲ ಜಿ.ಮೇಸ್ತ (25) ಮೃತಪಟ್ಟ ವ್ಯಕ್ತಿಯಾಗಿದ್ದು ಈತ ಗಣೇಶ ಸೇವಾ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ.ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.