ಮಸೀದಿ ಪ್ರವೇಶಕ್ಕೆ ಮುಸ್ಲಿಂ ಮಹಿಳೆಯರಿಗೆ ಇಸ್ಲಾಮ್‌ನಲ್ಲಿ ನಿರ್ಬಂಧವಿಲ್ಲ: ಸುಪ್ರೀಂ ಕೋರ್ಟ್‌ಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸ್ಪಷ್ಟನೆ
ಮಸೀದಿ ಪ್ರವೇಶಿಸಲು ಮುಸ್ಲಿಂ ಮಹಿಳೆಯರಿಗೆ ಇಸ್ಲಾಮ್‌ನಲ್ಲಿ ಅಡ್ಡಿಯಿಲ್ಲ, ಆದರೆ ಅಲ್ಲಿನ ಶಿಸ್ತು ಮತ್ತು ಪ್ರತ್ಯೇಕ ವ್ಯವಸ್ಥೆಯನ್ನು ಪಾಲಿಸಬೇಕು ಎಂದು AIMPLB ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಮಹಿಳೆಯರಿಗೆ ಸಾಮೂಹಿಕ ನಮಾಝ್ ಕಡ್ಡಾಯವಲ್ಲದಿದ್ದರೂ, ಭಾಗವಹಿಸಲು ಇಚ್ಛಿಸಿದರೆ ಅವಕಾಶವಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

