ಹಿಮಾಚಲ ಪ್ರದೇಶ: ಅಟಲ್ ಟನಲ್ ಬಳಿ ಭೀಕರ ಅಪಘಾತ; ರಾಜಸ್ಥಾನದ ಪ್ರವಾಸಿ ಸಾವು

ಮನಾಲಿ ಕಡೆಯಿಂದ ಲಹಾವುಲ್‌ಗೆ ತೆರಳುತ್ತಿದ್ದ ಪ್ರವಾಸಿಗರ ವಾಹನ ಅಟಲ್ ಟನಲ್ ಬಳಿ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ರಾಜಸ್ಥಾನದ ಪ್ರವಾಸಿ ಕೈಲಾಶ್ (34) ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.