ಕುರಾನ್ ಪಠಣದೊಂದಿಗೆ ಚಾಲನೆ ಪಡೆದ ಚನ್ನಕೇಶವ ರಥೋತ್ಸವ; ಸೌಹಾರ್ದತೆಯ ಪರಂಪರೆಗೆ ಸಾಕ್ಷಿಯಾದ ಹೊಯ್ಸಳ ನಗರಿ
ಬೇಲೂರಿನ ಚನ್ನಕೇಶವ ರಥೋತ್ಸವವು ದೊಡ್ಡಮೇದೂರು ಕಾಜಿ ಕುಟುಂಬದವರಿಂದ ಕುರಾನ್ ಪಠಣದೊಂದಿಗೆ ಇಂದು ಆರಂಭವಾಯಿತು. ವಿರೋಧಗಳ ನಡುವೆಯೂ ಜಿಲ್ಲಾಡಳಿತವು ಸಂಪ್ರದಾಯವನ್ನು ಮುಂದುವರಿಸಿದ್ದು, ಸಾವಿರಾರು ಭಕ್ತರು ಈ ಐತಿಹಾಸಿಕ ಸೌಹಾರ್ದತೆಯ ಕ್ಷಣಕ್ಕೆ ಸಾಕ್ಷಿಯಾದರು.

