ಬೈಂದೂರು: ಶಿರೂರಿನಲ್ಲಿ ಮನೆಗಳ್ಳತನಕ್ಕೆ ಯತ್ನಿಸಿದ ಆರೋಪಿ ಬಂಧನ
ಬೈಂದೂರಿನ ಶಿರೂರು ಕೋಣಮಕ್ಕೆಯಲ್ಲಿ ಮನೆಯ ಬಾಗಿಲು ಒಡೆದು ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿ ಪೌಜಾನ್ ಅಹ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯವರು ಬೊಬ್ಬೆ ಹಾಕಿದಾಗ ಕಳ್ಳ ಪರಾರಿಯಾಗಿದ್ದನು. ತನಿಖೆ ನಡೆಸಿದ ವಿಶೇಷ ತಂಡ ಆರೋಪಿಯನ್ನು ಸೆರೆಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

