ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್‌ಗೆ ಕರ್ನಾಟಕ ಪುರಸಭೆ ಕಾಯ್ದೆ 1964 ರ ಕಲಂ -11 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿಯನ್ನಾಧರಿಸಿ, ವಾರ್ಡುವಾರು ಮೀಸಲಾತಿಯನ್ನು ನಿಗಧಿಪಡಿಸಿ, ಅಂತಿಮ ಅಧಿಸೂಚನೆಯನ್ನು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.
ವಾರ್ಡುವಾರು ಮೀಸಲಾತಿ ವಿವರ:
ತಾರಾಪತಿ – ಹಿಂದುಳಿದ ವರ್ಗ-ಎ (ಮಹಿಳೆ), ವಿರೂಪಾಕ್ಷಿ – ಸಾಮಾನ್ಯ, ಸೋಮೇಶ್ವರ – ಹಿಂದುಳಿದ ವರ್ಗ -ಬಿ (ಮಹಿಳೆ), ದೊಂಬೆ – ಸಾಮಾನ್ಯ, ಪಂಚಲಿಂಗೇಶ್ವರಿ – ಹಿಂದುಳಿದ ವರ್ಗ ಎ, ಆಲಂದೂರು-ತೂದಳ್ಳಿ – ಸಾಮಾನ್ಯ (ಮಹಿಳೆ), ಕಡ್ಕೆ-ಮದ್ದೋಡಿ – ಹಿಂದುಳಿದ ವರ್ಗ-ಬಿ, ಯೋಜನಾ ನಗರ -ಪರಿಶಿಷ್ಟ ಜಾತಿ, ಬಂಕೇಶ್ವರ- ಹಿಂದುಳಿದ ವರ್ಗ-ಎ (ಮಹಿಳೆ), ಬೈಂದೂರು ಪೇಟೆ- ಸಾಮಾನ್ಯ, ವೆಂಕಟ್ರಮಣ- ಸಾಮಾನ್ಯ, ಪಾಣ್ತಿಗರಡಿ – ಹಿಂದುಳಿದ ವರ್ಗ-ಎ, ಯಡ್ತರೆ- ಸಾಮಾನ್ಯ (ಮಹಿಳೆ), ಮಯ್ಯಾಡಿ ಕಳವಾಡಿ – ಹಿಂದುಳಿದ ವರ್ಗ-ಎ (ಮಹಿಳೆ), ಬಾಡಾ, ಬಿಯಾರ- ಸಾಮಾನ್ಯ, ಸೂರ್ಕುಂದ – ಹಿಂದುಳಿದ ವರ್ಗ ಎ, ಗಂಗನಾಡು – ಪರಿಶಿಷ್ಟ ಪಂಗಡ, ಚಂದಣ-ವಸ್ರೆ, ತಗ್ಗರ್ಸೆ ಪೇಟೆ ಹಾಗೂ ನೆಲ್ಯಾಡಿ ಕಾಡೋಡಿ ಗೆ – ಸಾಮಾನ್ಯ (ಮಹಿಳೆ) ಮೀಸಲಾತಿಯನ್ನು ನಿಗಧಿಪಡಿಸಿದ್ದು, ಈ ಬಗ್ಗೆ ಸಲಹೆ / ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ ದಿನಾಂಕದಿಂದ 7 ದಿನಗಳ ಒಳಗಾಗಿ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.