ದೂರು-ಪ್ರತಿದೂರುಗಳ ತನಿಖೆಗೆ ಒಬ್ಬರೇ ಅಧಿಕಾರಿ ನೇಮಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು
ಒಂದೇ ಪ್ರಕರಣದ ದೂರು ಮತ್ತು ಪ್ರತಿದೂರುಗಳನ್ನು ಒಬ್ಬರೇ ತನಿಖಾಧಿಕಾರಿ ತನಿಖೆ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಸರ್ಕಾರದ ಸುತ್ತೋಲೆ ಉಲ್ಲಂಘಿಸಿ ಇಬ್ಬರು ಅಧಿಕಾರಿಗಳನ್ನು ನೇಮಿಸಿದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

