ವಿನಾಕಾರಣ ಪರಸ್ಪರ ದ್ವೇಷಿಸುವುದು ಧರ್ಮವೇ ಅಲ್ಲ; ಈದ್ ಸೌಹಾರ್ದ ಸಮ್ಮಿಲನದಲ್ಲಿ ಜಯಪ್ರಕಾಶ್ ಹೆಗ್ಡೆ

ಹಂಗಳೂರಿನಲ್ಲಿ ನಡೆದ ಈದ್ ಸೌಹಾರ್ದ ಸಮ್ಮಿಲನದಲ್ಲಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಪರಸ್ಪರ ದ್ವೇಷಿಸುವುದು ಧರ್ಮವಲ್ಲ, ಸಮಾಜದ ಸಂಕಟಕ್ಕೆ ನೆರವಾಗುವುದೇ ನಿಜವಾದ ಧರ್ಮ ಎಂದು ಹೇಳಿದರು. ಸಮಾಜ ಕಟ್ಟಲು ಬಂದ ದಾರ್ಶನಿಕರ ಹೆಸರಲ್ಲಿ ಜಾತಿಗಳನ್ನು ಸೃಷ್ಟಿಸುತ್ತಿರುವುದು ದುರಂತ ಎಂದು ಅವರು ವಿಷಾದಿಸಿದರು.