ಹುಬ್ಬಳ್ಳ ಬಸ್ ಅಪಘಾತ ಪ್ರಕರಣ: ಎಲ್ಲಾ ಸಾರಿಗೆ ಬಸ್ಸುಗಳ ಕಿಟಕಿಗಳಿಗೆ ಕಬ್ಬಿಣದ ಸರಳು ಅಳವಡಿಸಲು ಮತ್ತು ಗುಟ್ಕಾ ನಿಷೇಧಕ್ಕೆ KPCA ಪತ್ರ
ಹುಬ್ಬಳ್ಳಿ ಸಮೀಪ ಬಸ್ಸಿನ ಕಿಟಕಿಯಿಂದ ಗುಟ್ಕಾ ಉಗುಳುವಾಗ ಲಾರಿ ಡಿಕ್ಕಿಯಾಗಿ ಯುವಕನ ಶಿರಚ್ಛೇದವಾದ ಭೀಕರ ಘಟನೆಗೆ ಸಂಬಂಧಿಸಿ, ರಾಜ್ಯದ ಎಲ್ಲಾ ಸರ್ಕಾರಿ ಬಸ್ಸುಗಳ ಕಿಟಕಿಗಳಿಗೆ ಕಬ್ಬಿಣದ ಸರಳು ಅಳವಡಿಸಲು ಹಾಗೂ ಬಸ್ಸುಗಳಲ್ಲಿ ಗುಟ್ಕಾ ಬಳಸುವವರಿಗೆ 1,000 ರೂ. ದಂಡ ವಿಧಿಸಲು ಪೊಲೀಸ್ ದೂರುಗಳ ಪ್ರಾಧಿಕಾರ ಸಾರಿಗೆ ಇಲಾಖೆಗೆ ಪತ್ರ ಬರೆದಿದೆ.

