ಅಜ್ಮೀರ್ ದರ್ಗಾ ಯಾತ್ರೆ ಮುಗಿಸಿ ಮರಳುತ್ತಿದ್ದ ಕಾಸರಗೋಡು ಮೂಲದ ವೃದ್ಧ ರೈಲಿನಲ್ಲಿ ನಾಪತ್ತೆ

ಅಜ್ಮೀರ್ ದರ್ಗಾ ದರ್ಶನ ಮುಗಿಸಿ ಮರುಸಾಗರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾಸರಗೋಡಿಗೆ ಮರಳುತ್ತಿದ್ದ ವೃದ್ಧ ಮುಸಾ ಅಲಿಯಾಸ್ ಅಬುಸಾಲಿ (68) ಅವರು ಕಾರವಾರ ಮತ್ತು ಮಂಗಳೂರು ನಡುವೆ ನಾಪತ್ತೆಯಾಗಿದ್ದಾರೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.