ಚಿಕ್ಕಮಗಳೂರು: ಮಾಣಿಕ್ಯಧಾರ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ; 2,000 ಅಡಿ ಆಳದ ಕಂದಕದಲ್ಲಿ ಅಂತ್ಯವಾದ ಶೋಧ
ಚಿಕ್ಕಮಗಳೂರಿನ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಕೇರಳದ ಪಾಲಕ್ಕಾಡ್ ಮೂಲದ ಬಾಲಕಿ ಶ್ರೀನಂದಾ (15) ಅವರ ಶವ 2,000 ಅಡಿ ಆಳದ ಕಂದಕದಲ್ಲಿ ಪತ್ತೆಯಾಗಿದೆ. ರೀಲ್ಸ್ ಮಾಡುತ್ತಿದ್ದ ವೇಳೆ ಮೆಟ್ಟಿಲುಗಳಿಂದ ಜಾರಿದ ಶಂಕೆಯಿದ್ದು, ಮೂರು ದಿನಗಳ ಬೃಹತ್ ಕಾರ್ಯಾಚರಣೆಯ ನಂತರ ಶವ ಹೊರತೆಗೆಯಲಾಗಿದೆ.

