ಕೊಂಕಣ ರೈಲ್ವೆ ಅಭಿವೃದ್ಧಿ: ಬೈಂದೂರು ನಿಲ್ದಾಣ ಮೇಲ್ದರ್ಜೆಗೆ; ಶಿರೂರು-ಉಡುಪಿ ನಡುವೆ ಹಳಿ ನವೀಕರಣ
ಕೊಂಕಣ ರೈಲ್ವೆಯ ಬೈಂದೂರು ನಿಲ್ದಾಣವನ್ನು ಕ್ರಾಸಿಂಗ್ ಸ್ಟೇಷನ್ ಆಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದ್ದು, ಶಿರೂರು-ಉಡುಪಿ ನಡುವೆ ಹಳಿ ನವೀಕರಣಕ್ಕೆ ಚಾಲನೆ ನೀಡಲಾಗುವುದು. ವಿವಿಧ ನಿಲ್ದಾಣಗಳಲ್ಲಿ ಲಿಫ್ಟ್, ಮೇಲ್ಸೇತುವೆ ಮತ್ತು ಪ್ಲಾಟ್‌ಫಾರ್ಮ್ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಮೀಸಲಿಡಲಾಗಿದೆ.

