ಕುಂದಾಪುರ: ದೇವಸ್ಥಾನ ಹುಂಡಿ ಕಳವು ಪ್ರಕರಣ; ಇಬ್ಬರು ಅಂತರಜಿಲ್ಲಾ ಕಳ್ಳರ ಬಂಧನ
ಆಜ್ರಿ ಉಮಾಮಹೇಶ್ವರ ದೇವಸ್ಥಾನದ ಕಾಣಿಕೆ ಹುಂಡಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಇಳಕಲ್‌ನಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಬೈಕ್ ಮತ್ತು ಹುಂಡಿ ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
