ಕುಂದಾಪುರ, ಆಗಸ್ಟ್ 27, 2025: ದಕ್ಷಿಣ ಕನ್ನಡ-ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್‌ನ ಕುಂದಾಪುರ-ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ನಾವುಂದದ ಸ್ಮಾರ್ಟ್ ಟೆಕ್‌ನ ಮಾಲಿಕ ಮಹೇಶ್ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ಕುಂದಾಪುರದ ಎಂ2ಕೆ ಮೊಬೈಲ್‌ನ ಕರುಣಾಕರ ಆಚಾರ್ಯ ಮರವಂತೆ ಆಯ್ಕೆಯಾಗಿದ್ದಾರೆ.
ಕುಂದಾಪುರದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಮೊಬೈಲ್ ರಿಪೇರಿ ಮತ್ತು ಮಾರಾಟಗಾರರ ಯೂನಿಯನ್ ರಚನೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಮೊಬೈಲ್ ಕ್ಷೇತ್ರದ ವ್ಯಾಪಾರಿಗಳು ಎದುರಿಸುತ್ತಿರುವ ಸವಾಲುಗಳು, ಅನಾರೋಗ್ಯಕರ ಸ್ಪರ್ಧೆಯಿಂದ ಆರ್ಥಿಕ ಕುಂಠಿತ, ಮತ್ತು ಇದಕ್ಕೆ ಪರಿಹಾರವಾಗಿ ಸಂಘಟನೆಯ ಅಗತ್ಯತೆಯ ಬಗ್ಗೆ ಚರ್ಚಿಸಲಾಯಿತು. ಉಡುಪಿ ಜಿಲ್ಲಾ ಯೂನಿಯನ್‌ನ ಮಾರ್ಗದರ್ಶನದಲ್ಲಿ ತಾಲೂಕು ಸಮಿತಿಯನ್ನು ರಚಿಸಲಾಯಿತು.
ತಾಲೂಕು ಸಮಿತಿಯ ಆಯ್ಕೆಯಾದ ಪದಾಧಿಕಾರಿಗಳು:
- ಗೌರವಾಧ್ಯಕ್ಷ: ಇರ್ಷಾದ್ (ಕ್ಲಾಸಿಕ್ ಮೊಬೈಲ್, ಕುಂದಾಪುರ)
- ಗೌರವ ಸಲಹೆಗಾರರು: ಪ್ರಕಾಶ್ ಪೈ (ಮಹಾಮ್ಮಯಿ ಮೊಬೈಲ್, ಕೊಟೇಶ್ವರ), ಮಾಚ ಮೊಗವೀರ (ಶಿರೂರು)
- ಅಧ್ಯಕ್ಷ: ಮಹೇಶ್ ಪೂಜಾರಿ (ಸ್ಮಾರ್ಟ್ ಟೆಕ್, ನಾವುಂದ)
- ಕಾರ್ಯದರ್ಶಿ: ಕರುಣಾಕರ ಆಚಾರ್ಯ ಮರವಂತೆ (ಎಂ2ಕೆ ಮೊಬೈಲ್, ಕುಂದಾಪುರ)
- ಉಪಾಧ್ಯಕ್ಷರು: ರಾಘವೇಂದ್ರ (ಶ್ರೀ ಟೆಕ್, ರವಿ ಶೆಟ್ಟಿ), ನಾಗೇಂದ್ರ ನಾಯ್ಕ್ (ಓಷಿಯನ್ ಮೊಬೈಲ್, ಉಪ್ಪುಂದ)
ಸದಸ್ಯರು:
- ಸುರೇಶ್ ಸನ್ನಿದಿ (ಕೊಟೇಶ್ವರ)
- ರಾಹುಲ್ (ವಿಘ್ನಶ್, ತೆಕ್ಕಟ್ಟೆ)
- ಅಶೋಕ್ (ಸಾಯಿ ಕಮ್ಯುನಿಕೇಷನ್)
- ವಿದ್ಯಾದರ (ಶೈನ್, ಕೊಟೇಶ್ವರ)
- ಮೊಹಮ್ಮದ್ ಅಶ್ರಫ್ (ಸೆಲ್ ಇನ್ ಟೌನ್, ಬೈಂದೂರು)
- ಅನಿಲ್ ಕೆ (ಶೈನ್, ಕುಂದಾಪುರ)
- ರಾಜೇಶ್ (ಮೊಬೈಲ್ ಪ್ಯಾಲೇಸ್)
- ನೌಶಾದ್ (ಸ್ಪೀಡ್ ಮೊಬೈಲ್)
- ಸಲ್ಮಾನ್ (ಮೊಬೈಲ್ ಕಿಂಗ್)
- ಗೋಪಾಲ (ಜಾಹ್ನವಿ, ವಂಡ್ಸೆ)
- ಅಜಿತ್ (ದುರ್ಗಾ ಮೊಬೈಲ್, ಸಿದ್ದಾಪುರ)
- ಪ್ರಕಾಶ್ (ಓಂಕಾರ್, ಗಂಗೊಳ್ಳಿ)
- ಮುಸ್ತಫಾ (ಮೊಬೈಲ್ ಎಕ್ಸ್, ಕುಂದಾಪುರ)
- ಪ್ರಕಾಶ್ ಪೂಜಾರಿ (ಜೆ.ಕೆ ಮೊಬೈಲ್)
- ನಿತಿನ್ (ಮೊಬೈಲ್ ಗ್ಯಾರೇಜ್, ಕೋಟ)