ಕುಂದಾಪುರ: ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ

ವಂಡ್ಸೆ ನಿವಾಸಿಯ ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಿಂದ 1.27 ಲಕ್ಷ ರೂ. ಹಣ ಲಪಟಾಯಿಸಿದ ಪ್ರಕರಣ ದಾಖಲಾಗಿದೆ. 1930ಕ್ಕೆ ದೂರು ನೀಡಿದ ಬಳಿಕ 27 ಸಾವಿರ ರೂ. ಮರು ಜಮೆಯಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕುಂದಾಪುರ: ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ

ಕುಂದಾಪುರ: ವಂಡ್ಸೆ ನಿವಾಸಿ ನಾರಾಯಣ ಶೆಟ್ಟಿ ಅವರ ಮೊಬೈಲ್ ಹ್ಯಾಕ್ ಮಾಡಿ ಅವರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದ ಬಗ್ಗೆ ಇತ್ತೀಚಿಗೆ ಪ್ರಕರಣ ದಾಖಲಾಗಿದೆ.

ಸೆ.17ರಂದು ಮೊಬೈಲ್‌ಗೆ ಬಂದ ಕರೆಯನ್ನು ಸ್ವೀಕರಿಸಿದಾಗ ರಾಹುಲ್ ಎಂಬಾತ ಹಿಂದಿಯಲ್ಲಿ ಮಾತನಾಡಿದ್ದು, ರಾಂಗ್ ನಂಬರ್ ಎಂದು ಕರೆ ಕಟ್ ಮಾಡಲಾಗಿತ್ತು. ಬಳಿಕ ಮೊಬೈಲ್‌ಗೆ ಓಟಿಪಿ ನಂಬ್ರವಿರುವ ಮೆಸೆಜ್ ಬಂದಿತ್ತು. ಅನುಮಾನಗೊಂಡು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಕೇವಲ 54ರೂ. ಇರುವುದಾಗಿ ಹಿಂದಿಯಲ್ಲಿ ಕಂಡುಬಂದಿದೆ.

ಖಾತೆಯಲ್ಲಿದ್ದ 1.27ಲಕ್ಷ ಹಣದಲ್ಲಿ 54 ರೂ.ಬಿಟ್ಟು ಉಳಿದ ಹಣ ಬೇರೆಯ ವರ ಬ್ಯಾಂಕ್ ಖಾತೆಗೆ ವರ್ಗಾವಣೆಗೊಂಡಿತ್ತು. 1930 ನಂಬ್ರಕ್ಕೆ ಫೋನ್ ಮಾಡಿದ ಬಳಿಕ 27000 ರೂ. ಹಣ ಖಾತೆಗೆ ಮರು ಜಮೆಯಾಗಿದೆ.

ಎಸ್ ಡಿಸಿಸಿ ಬ್ಯಾಂಕ್‌ನಲ್ಲಿರುವ ತಂದೆ ಅವರ ಖಾತೆಗೆ ನನ್ನ ಮೊಬೈಲ್ ಲಿಂಕ್ ಆಗಿದ್ದು ರಾಹುಲ್ ಹೆಸರಿನ ವ್ಯಕ್ತಿ 90080***** ನಂಬ್ರದಿಂದ ಕರೆ ಮಾಡಿ ನನ್ನ ಮೊಬೈಲ್ ಹ್ಯಾಕ್ ಮಾಡಿ 1ಲಕ್ಷ ರೂ. ಹಣವನ್ನು ಮೋಸದಿಂದ ಲಪಟಾಯಿಸಿದ್ದಾನೆ ಎಂದು ಅರುಣ್‌ ಕುಮಾರ ಶೆಟ್ಟಿ ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ