ಕುಂದಾಪುರ, ಆಗಸ್ಟ್ 27, 2025: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ತಾಲೂಕು ಘಟಕವು ಕುಂದಾಪುರ, ಹಂಗಳೂರು, ಅಮಾಸೆಬೈಲು, ಶಂಕರನಾರಾಯಣ, ಕೇದೂರು, ಮತ್ತು ಬೈಂದೂರು ಆರು ಹಿಂದುಳಿದ ವರ್ಗದ ಹುಡುಗಿಯರ ವಸತಿಗೃಹಗಳ ವಿದ್ಯಾರ್ಥಿನಿಯರಿಗೆ ಸೊಳ್ಳೆ ಪರದೆಗಳು ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಿದೆ.
ಈ ಕಾರ್ಯಕ್ರಮದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ತಾಲೂಕು ಘಟಕದ ಸಭಾಪತಿ ಎಸ್. ಜಯಕರ ಶೆಟ್ಟಿ, ಖಜಾಂಜಿ ಶಿವರಾಮ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯ ಸೀತಾರಾಮ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಕೆ., ಹಾಗೂ ವಸತಿಗೃಹದ ಮೇಲ್ವಿಚಾರಕಿ ಆಶಾದೇವಿ ಉಪಸ್ಥಿತರಿದ್ದರು.