ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕಗ್ಗಂಟು: ಗೊಂದಲ ಬಗೆಹರಿಸಲು ವೀಕ್ಷಕರ ಭೇಟಿ, ಮುಖಂಡರ ಅಭಿಪ್ರಾಯ ಸಂಗ್ರಹ
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿನ ಗೊಂದಲ ಬಗೆಹರಿಸಲು ಕೆಪಿಸಿಸಿ ವೀಕ್ಷಕರು ಕುಂದಾಪುರಕ್ಕೆ ಭೇಟಿ ನೀಡಿ ಮುಖಂಡರ ಸಭೆ ನಡೆಸಿದ್ದಾರೆ. ವಿಕಾಸ ಹೆಗ್ಡೆ ಅವರ ಆಯ್ಕೆಗೆ ತಡೆ ಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

