ಮಣಿಪಾಲ: ಆಸ್ಪತ್ರೆ ಎದುರಿನ ಕ್ಯಾಂಟೀನ್‌ನಿಂದ ವ್ಯಕ್ತಿಯ ಅಪಹರಣ; ತೆಲಂಗಾಣದ ವ್ಯವಹಾರದ ನಂಟು?
ಮಣಿಪಾಲದ ಆಸ್ಪತ್ರೆ ಸಮೀಪದ ಕ್ಯಾಂಟೀನ್‌ನಿಂದ ರಾಜೇಶ್ ಎಂಬುವವರನ್ನು ಕಪ್ಪು ಬಣ್ಣದ ಕಾರಿನಲ್ಲಿ ಬಂದ ತಂಡ ಅಪಹರಿಸಿದೆ. ತೆಲಂಗಾಣದ ಹಳೆಯ ವ್ಯವಹಾರದ ಕಿರಿಕ್ ಈ ಕೃತ್ಯಕ್ಕೆ ಕಾರಣವೆಂದು ಶಂಕಿಸಲಾಗಿದ್ದು, ಎಂಟು ಮಂದಿಯ ವಿರುದ್ಧ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

