ಬೈಂದೂರಿಗೆ ಶೀಘ್ರವೇ ತಾಲೂಕು ಆಸ್ಪತ್ರೆ ಮಂಜೂರು: ಯು.ಟಿ. ಖಾದರ್
ಬೈಂದೂರು ಪಟ್ಟಣ ಪಂಚಾಯತ್‌ನಿಂದ ಗ್ರಾಮೀಣ ಭಾಗಗಳನ್ನು ಕೈಬಿಡಲು ಆಗ್ರಹಿಸಿ 292 ದಿನಗಳಿಂದ ಹೋರಾಡುತ್ತಿರುವ ರೈತರ ನಿಯೋಗಕ್ಕೆ ಸಚಿವ ಯು.ಟಿ. ಖಾದರ್ ನ್ಯಾಯ ಒದಗಿಸುವ ಭರವಸೆ ನೀಡಿದ್ದು, ಜೊತೆಗೆ ಬೈಂದೂರಿಗೆ ಶೀಘ್ರ ತಾಲೂಕು ಆಸ್ಪತ್ರೆ ಮಂಜೂರು ಮಾಡುವುದಾಗಿ ಪ್ರಕಟಿಸಿದ್ದಾರೆ.

