ನೇಜಾರ್, ಆಗಸ್ಟ್ 18, 2025: ನೇಜಾರ್‌ನಲ್ಲಿ ಆಲ್ ಫೋರ್ಕಾನ್ ವಿಶೇಷ ಚೇತನ ಮಕ್ಕಳಿಗಾಗಿ ಆಯೋಜಿಸಲಾದ ಪ್ರೇರಣ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಸಬಿಹಾ ಫಾತಿಮಾ, ಸಭಿಕರನ್ನುದ್ದೇಶಿಸಿ ಮಾತನಾಡಿ, “ವಿಶೇಷ ಚೇತನ ಮಕ್ಕಳ ಆರೈಕೆ ಮತ್ತು ಅವರ ಜೀವನ ರೂಪಿಸುವಲ್ಲಿ ಪೋಷಕರ ಜವಾಬ್ದಾರಿ ಅತ್ಯಂತ ಮುಖ್ಯವಾಗಿದೆ,” ಎಂದು ತಿಳಿಸಿದರು.
ವೇದಿಕೆಯಲ್ಲಿ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆ, ತೋನ್ಸೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾ ಮತ್ತು ಸಹ ಶಿಕ್ಷಕಿ ಶ್ರೀಮತಿ ಲವೀನಾ ಕ್ಲಾರಾ ಉಪಸ್ಥಿತರಿದ್ದರು.
ಶಾಲಾ ಸ್ಥಾಪಕಿ ಹಾಗೂ ಪ್ರಾಂಶುಪಾಲೆ ದಿಲ್ದಾರ ಫಜಲು ರೆಹೆಮನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕಿ ರೇಷ್ಮಾ ಸ್ವಾಗತ ಭಾಷಣ ನೀಡಿದರು. ಶಿಕ್ಷಕಿ ಅಸ್ಮಾ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಫರಿಹಾ ಕಾರ್ಯಕ್ರಮವನ್ನು ನಿರ್ವಹಿಸಿದರು.