ಶಿರೂರು ಅಸೋಸಿಯೇಷನ್ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ

ಶಿರೂರು ಅಸೋಸಿಯೇಷನ್‌ನಿಂದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಮೂರು ಕಂಪ್ಯೂಟರ್‌ಗಳ ಕೊಡುಗೆ. ಎಂ.ಎಂ. ಫೌಂಡೇಶನ್‌ನಿಂದ ಐದು ಕಂಪ್ಯೂಟರ್‌ಗಳನ್ನು ಸಹ ನೀಡಲಾಗಿದೆ.

ಶಿರೂರು ಅಸೋಸಿಯೇಷನ್ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ

ಶಿರೂರು, ಆಗಸ್ಟ್ 31, 2025: ಶಿರೂರು ಅಸೋಸಿಯೇಷನ್‌ನಿಂದ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಮೂರು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಷಯವನ್ನು ಆರಂಭಿಸಲಾಗಿದ್ದು, ಎಂ.ಎಂ. ಫೌಂಡೇಶನ್‌ನಿಂದ ಐದು ಕಂಪ್ಯೂಟರ್‌ಗಳು ಮತ್ತು ಶಿರೂರು ಅಸೋಸಿಯೇಷನ್‌ನಿಂದ ಮೂರು ಕಂಪ್ಯೂಟರ್‌ಗಳನ್ನು ಒಟ್ಟಿಗೆ ಕೊಡುಗೆಯಾಗಿ ನೀಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಿರೂರು ಅಸೋಸಿಯೇಷನ್ ಅಧ್ಯಕ್ಷ ಮುನಾಫ್, ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಒಂದು ಹಿರಿಯ ಶೈಕ್ಷಣಿಕ ಸಂಸ್ಥೆಯಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಒದಗಿಸುವ ಉದ್ದೇಶದಿಂದ ದಾನಿಗಳ ಸಹಕಾರದೊಂದಿಗೆ ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ತಮ್ಮ ಶಿಕ್ಷಣವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ, ಕಾವಾ ರಿಯಾಜ್, ಬುಸಿ ರಹಮತುಲ್ಲಾ, ನೇಜಿ ಖಾಲಿದ್, ಅಬ್ದುಲ್ ಖಾಲಿಕ್, ಪತ್ರಕರ್ತ ಅರುಣ್ ಕುಮಾರ್ ಶಿರೂರು, ಬುಡ್ಡು ಉಬದುಲ್ಲಾ, ಮಕ್ಳೆ ಯಾಸೀನ್ ಮತ್ತು ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

ಈ ಲೇಖನವನ್ನು ಹಂಚಿಕೊಳ್ಳಿ