ಶಿರಸಿ

ಶಿರಸಿ: ಬೈಕ್ ಅಪಘಾತ; ಯುವಕ ಸ್ಥಳದಲ್ಲಿಯೇ ಸಾವು

ಶಿರಸಿ, ಆಗಸ್ಟ್ 23, 2025: ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಬೈಕ್ ಅಪಘಾತ; ಐಟಿಐ ವಿದ್ಯಾರ್ಥಿ ನಿಶಾಂತ್ ಬನ್ವಾರಿ ಸಿಂಗ್ ಚೌಧರಿ (20) ಸ್ಥಳದಲ್ಲಿಯೇ ಸಾವು. ಆಟೋ ರಿಕ್ಷಾದೊಂದಿಗೆ ಡಿವೈಡರ್‌ಗೆ ಬಡಿದ ಪರಿಣಾಮ ದುರ್ಘಟನೆ.

ಶಿರಸಿ: ಬೈಕ್ ಅಪಘಾತ; ಯುವಕ ಸ್ಥಳದಲ್ಲಿಯೇ ಸಾವು

ಶಿರಸಿ, ಆಗಸ್ಟ್ 23, 2025: ಶಿರಸಿಯ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತನನ್ನು ಶಾಂತಿ ನಗರದ ನಿವಾಸಿ ನಿಶಾಂತ್ ಬನ್ವಾರಿ ಸಿಂಗ್ ಚೌಧರಿ (20) ಎಂದು ಗುರುತಿಸಲಾಗಿದೆ. ಈತ ಐಟಿಐ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ.

ನಿಶಾಂತ್ ಮನೆಯಲ್ಲಿ ತಯಾರಿಸಿದ ಸಿಹಿ ಪದಾರ್ಥಗಳನ್ನು ಅಂಗಡಿಯೊಂದಕ್ಕೆ ತಲುಪಿಸಲು ತೆರಳುತ್ತಿದ್ದ ವೇಳೆ ಆಟೋ ರಿಕ್ಷಾ ಒಂದು ಅಡ್ಡ ಬಂದ ಪರಿಣಾಮ, ಬೈಕ್ ರಸ್ತೆಯ ಮಧ್ಯದ ಡಿವೈಡರ್‌ಗೆ ಬಡಿದಿದೆ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಯುವಕನಿಗೆ ತೀವ್ರ ಗಾಯಗಳಾಗಿ, ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾನೆ.

ಸುದ್ದಿ ತಿಳಿದ ಕೂಡಲೇ ಸಿಪಿಐ ಶಶಿಕಾಂತ್ ವರ್ಮಾ ಮತ್ತು ಪಿಎಸ್‌ಐ ರತ್ನಾ ಕುರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ