ವೈದ್ಯ ರಮೇಶ ಕಲ್ಗುಟ್ಕರ್ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಆರೋಪಿ ಬಂಧನ, 15 ಲಕ್ಷದ ಚಿನ್ನಾಭರಣ ವಶ
ಶಿರಸಿಯ ಆಯುರ್ವೇದ ವೈದ್ಯ ರಮೇಶ ಕಲ್ಗುಟ್ಕರ್ ಹತ್ಯೆ ಪ್ರಕರಣದ ಆರೋಪಿ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

