ಶಿರಸಿ: 24 ಗಂಟೆಯೊಳಗೆ ಕೊಲೆ ರಹಸ್ಯ ಭೇದಿಸಿದ ಪೊಲೀಸ್; ಪತ್ನಿ ಹಾಗೂ ಆಕೆಯ ಪ್ರಿಯಕರನ ಬಂಧನ
ಶಿರಸಿ ತಾಲೂಕಿನ ಶಿಂಗನಮನೆ ಕಾಡಿನಲ್ಲಿ ನಡೆದಿದ್ದ ಪರಮೇಶ್ವರ ಬಾಬು ನಾಯಕ್ ಕೊಲೆ ಪ್ರಕರಣವನ್ನು ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಗೈದ ಮೃತನ ಪತ್ನಿ ಅರ್ಪಿತಾ ಹಾಗೂ ಆಕೆಯ ಪ್ರಿಯಕರ ಪರಮೇಶ್ವರ ತಿಮ್ಮ ನಾಯಕ್‌ನನ್ನು ಬಂಧಿಸಿದ್ದಾರೆ.

