ನಿಂದಕರೇ ನಮ್ಮ ಸುಧಾರಕರು; ಕನ್ನಡ-ಸೌಹಾರ್ದದ ಸಂದೇಶ ಸಾರಿದ ಟಿ.ಎ.ನಾರಾಯಣ ಗೌಡ ಅವರಿಗೆ ‘ಸೌಹಾರ್ದ ಸಿರಿ’ ಪ್ರಶಸ್ತಿ ಪ್ರದಾನ

ಮಂಡ್ಯದಲ್ಲಿ ನಡೆದ ಮುಸ್ಲಿಂ ಬಾಂಧವ್ಯ ವೇದಿಕೆಯ ಸಮಾರಂಭದಲ್ಲಿ ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರಿಗೆ ‘ಸೌಹಾರ್ದ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡದ ಉಳಿವಿಗಾಗಿ ಮುಸ್ಲಿಮರ ಕೊಡುಗೆಯನ್ನು ಸ್ಮರಿಸಿದ ಅವರು, ಮಸೀದಿಗಳಲ್ಲಿ ಕನ್ನಡ ಬಳಕೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಕಾರ್ಯಕ್ರಮ ಉದ್ಘಾಟಿಸಿ ಶೈಕ್ಷಣಿಕ ಜಾಗೃತಿ ಮತ್ತು ರಾಜಕೀಯ ರಹಿತ ಸಂಘಟನೆಯ ಬಗ್ಗೆ ಕರೆ ನೀಡಿದರು.