ಉಡುಪಿಯಲ್ಲಿ ಶಿಶು ಕಳ್ಳಸಾಗಣೆ ಜಾಲ ಬಯಲು: ನಕಲಿ ದಾಖಲೆ ಸೃಷ್ಟಿಸಿ ಮಗು ಹಸ್ತಾಂತರ; ಖ್ಯಾತ ವೈದ್ಯ ಸೇರಿ ಇಬ್ಬರ ಬಂಧನ
ಉಡುಪಿಯ ಸಂತೆಕಟ್ಟೆಯಲ್ಲಿ ಕಾನೂನುಬಾಹಿರವಾಗಿ ಮಗುವನ್ನು ಸಾಕುತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಅಕ್ರಮ ದತ್ತು ಜಾಲವನ್ನು ಪತ್ತೆಹಚ್ಚಿದ್ದಾರೆ. ಮಗುವಿನ ನಕಲಿ ಜನನ ಪತ್ರ ಸೃಷ್ಟಿಸಿ ಹಸ್ತಾಂತರಿಸಿದ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಹಾಗೂ ಪ್ರಕಾಶ್ ಎಂಬಾತನನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ.

