ಉಡುಪಿ, ಸೆಪ್ಟೆಂಬರ್ 15, 2025: ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದಲ್ಲಿ ಜಿಲ್ಲಾ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಐಪಿಎಸ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಂದೂಕು ತರಬೇತಿಯ ಬಗ್ಗೆ ಅವರು ವಿವರವಾದ ಮಾಹಿತಿ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕ ತಿಮ್ಮಪ್ಪ ಗೌಡ ಮತ್ತು ಸಶಸ್ತ್ರ ಮೀಸಲು ಆರಕ್ಷಕ ನಿರೀಕ್ಷಕ ರವಿ ಕುಮಾರ್ ಅವರು ಉಪಸ್ಥಿತರಿದ್ದರು. ಐದು ದಿನಗಳ ಅವಧಿಯ ಈ ತರಬೇತಿಗೆ ಒಟ್ಟು 195 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಉಡುಪಿ ಉಪವಿಭಾಗದಿಂದ 59, ಕಾರ್ಕಳ ಉಪವಿಭಾಗದಿಂದ 55 ಮತ್ತು ಕುಂದಾಪುರ ಉಪವಿಭಾಗದಿಂದ 81 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.
ತರಬೇತಿ ಕಾರ್ಯಕ್ರಮಗಳು ಉಡುಪಿ ಉಪವಿಭಾಗದ್ದು ಉಡುಪಿಯಲ್ಲಿ, ಕಾರ್ಕಳ ಉಪವಿಭಾಗದ್ದು ಹೆಬ್ರಿಯಲ್ಲಿ ಮತ್ತು ಕುಂದಾಪುರ ಉಪವಿಭಾಗದ್ದು ಕುಂದಾಪುರದಲ್ಲಿ ನಡೆಯಲಿದೆ.