ಉಡುಪಿ, ಸೆಪ್ಟೆಂಬರ್ 07, 2025: ಸೀರತ್ ಸ್ವಾಗತ ಸಮಿತಿಯು ಪ್ರವಾದಿ ಮುಹಮ್ಮದ್ ಅವರ ಆದರ್ಶಗಳನ್ನು ಗಮನದಲ್ಲಿಟ್ಟುಕೊಂಡು, ಸೀರತ್ ಅಭಿಯಾನದ ಭಾಗವಾಗಿ ಹೂಡೆ ಬೀಚ್‌ನಿಂದ ಕೆಮ್ಮಣ್ಣು ಚರ್ಚ್‌ವರೆಗೆ ಬೃಹತ್ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 7, 2025ರಂದು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮವು ಪರಿಸರ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸುವ ಗುರಿಯನ್ನು ಹೊಂದಿತ್ತು.

ಕಾರ್ಯಕ್ರಮವನ್ನು ಡಾ. ರಫೀಕ್ ಉದ್ಘಾಟಿಸಿ, “ಪ್ರವಾದಿ ಅವರ ಬೋಧನೆಗಳಲ್ಲಿ ಸ್ವಚ್ಛತೆಯು ಇಸ್ಲಾಮಿನ ಅವಿಭಾಜ್ಯ ಅಂಗವಾಗಿದೆ. ಈ ಕಾರ್ಯಕ್ರಮ ಶ್ಲಾಘನೀಯವಾಗಿದ್ದು, ಸಮಾಜಕ್ಕೆ ಮಾದರಿಯಾಗಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಇದ್ರೀಸ್ ಹೂಡೆ, ಹೈದರ್ ಅಲಿ ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಮಾತನಾಡಿ, ಸ್ವಚ್ಛತೆಯ ಮಹತ್ವವನ್ನು ಒತ್ತಿ ಹೇಳಿದರು.
ನೂರಾರು ಸೀರತ್ ಸ್ವಾಗತ ಸಮಿತಿಯ ಸದಸ್ಯರು ಭಾಗವಹಿಸಿ, ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಕಾರ್ಯಕ್ರಮದಲ್ಲಿ ಮುಸ್ತಾಕ್ ಕುದುರ್, ಹಸನ್ ಕೋಡಿಬೆಂಗ್ರೆ, ನಝೀರ್ ನೇಜಾರ್, ಡಾ. ಅಬ್ದುಲ್ ಅಝೀಝ್, ಅಬ್ದುಲ್ ಕಾದೀರ್ ಮೊಯ್ದಿನ್, ಅಮೀರ್ ಗುಜ್ಜರ್ ಬೆಟ್ಟು, ರಝಾಕ್ ನಕ್ವಾ, ಅಲ್ತಾಫ್ ನಕ್ವಾ, ಅಬ್ದುಲ್ ಕಲಾಮ್, ಹನೀಫ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.