ವಿಟ್ಲ, ಸೆಪ್ಟೆಂಬರ್ 16, 2025: ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಳಿಕೆ ಗ್ರಾಮದಲ್ಲಿ ಬೈಕ್‌ನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 6.27 ಗ್ರಾಂ ಗಾಂಜಾ, ಮೂರು ಮೊಬೈಲ್‌ಗಳು, ಮತ್ತು ಒಂದು ಬೈಕ್ ಸಹಿತ ಸುಮಾರು 17,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು: ಮಂಗಳಪದವು ನಿವಾಸಿ ಸನತ್ ಕುಮಾರ್ (23), ಮಹಮ್ಮದ್ ರಾಝಿಕ್ (23), ತಂದೆ: ಅಬ್ದುಲ್ ರಝಾಕ್, ಕೋಡಪದವು ನಿವಾಸಿ ಚೇತನ್ (23), ಎಣ್ಣೆಮಜಲು ನಿವಾಸಿ ಧ್ಯಾನ್ ಕರ್ಕೇರ. ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರು ಸಿಬ್ಬಂದಿಯೊಂದಿಗೆ ರೌಂಡ್ ಕರ್ತವ್ಯದಲ್ಲಿರುವಾಗ, ಅಳಿಕೆ ಗ್ರಾಮದ ಎರುಂಬು ರಸ್ತೆಯಲ್ಲಿ KA19EA7018 ನಂಬರ್‌ದ ದ್ವಿಚಕ್ರ ವಾಹನದ ಬಳಿ ಅನುಮಾನಾಸ್ಪದವಾಗಿ ನಿಂತಿರುವ ನಾಲ್ವರನ್ನು ಕಂಡು ವಿಚಾರಣೆ ನಡೆಸಿದರು. ವಿಚಾರಣೆಯಲ್ಲಿ ಅವರು ಗಾಂಜಾ ಮಾರಾಟದ ಉದ್ದೇಶದಿಂದ ನಿಂತಿರುವುದು ಬೆಳಕಿಗೆ ಬಂದಿತು.
ಬಂಧಿತರಿಂದ ವಶಪಡಿಸಿಕೊಂಡ ಸೊತ್ತುಗಳು: 6.27 ಗ್ರಾಂ ಗಾಂಜಾ (ನಿಷೇಧಿತ ಮಾದಕ ವಸ್ತು), ಮೂರು ಮೊಬೈಲ್ ಫೋನ್‌ಗಳು, ಮತ್ತು KA19EA7018 ನಂಬರ್‌ದ ದ್ವಿಚಕ್ರ ವಾಹನ. ಆರೋಪಿಗಳು ಬೈಕ್‌ನಲ್ಲಿ ಗಾಂಜಾವನ್ನು ಅಕ್ರಮವಾಗಿ ಸಾಗಿಸಿ, ಗಿರಾಕಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಗೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2025ರಡಿಯಲ್ಲಿ ಕಲಂ 8(b), 20(b)(ii)(A) NDPS ಆಕ್ಟ್, ಮತ್ತು 3(5) BNS 2023ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.