ಕುಂದಾಪುರ ಗುಂಡಿಕ್ಕಿ ಕೊಲೆ ಪ್ರಕರಣ: ಆರೋಪಿ ಡೆರಿಕ್ ಕ್ರಾಸ್ತಾ ಜಾಮೀನು ಅರ್ಜಿ ವಜಾ
ಕುಂದಾಪುರ ಚರ್ಚ್ ರಸ್ತೆ ಗುಂಡೇಟು ಕೊಲೆ ಪ್ರಕರಣದ ಆರೋಪಿ ಡೆರಿಕ್ ಕ್ರಾಸ್ತಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
2026ರ ಜುಲೈ 30ರಂದು ರಾತ್ರಿ 11:45ರ ಸುಮಾರಿಗೆ ಹಣಕಾಸಿನ ವಿವಾದ ಹಾಗೂ ಚಿಟ್ ಫಂಡ್ ವ್ಯವಹಾರದ ಮಧ್ಯಸ್ಥಿಕೆ ವಿಚಾರಕ್ಕೆ ಸಂಬಂಧಿಸಿ ಆರೋಪಿ ಡೆರಿಕ್ ಕ್ರಾಸ್ತಾ, ಮೃತ ಐವನ್ ರಿಚರ್ಡ್ ಮಸ್ಕರೇನಸ್ ಅವರಿಗೆ ಕರೆ ಮಾಡಿದ್ದ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕುಂದಾಪುರಕ್ಕೆ ಒಂಟಿಯಾಗಿ ಬರುವಂತೆ ಡೆರಿಕ್ ಸವಾಲು ಹಾಕಿದ್ದ. ನಂತರ ಜುಲೈ 31ರಂದು ನಸುಕಿನ ಜಾವ 1:30ಕ್ಕೆ ಡೆರಿಕ್ ತನ್ನ ಲೈವ್ ಲೊಕೇಶನ್ ಕಳುಹಿಸಿದ್ದ. ಅದರಂತೆ ಐವನ್ ರಿಚರ್ಡ್ ಅವರು ತಮ್ಮ ಕಾರಿನಲ್ಲಿ ಕುಂದಾಪುರದ ಹೋಲಿ ರೋಸರಿ ಚರ್ಚ್ ಎದುರಿನ ಕಾಂಕ್ರೀಟ್ ರಸ್ತೆಗೆ ತಲುಪಿದಾಗ, ಬೆಳಗಿನ ಜಾವ 3:15ಕ್ಕೆ ಕಪ್ಪು-ಕೆಂಪು ಬಣ್ಣದ ಮಹೀಂದ್ರಾ ಥಾರ್ ವಾಹನದಲ್ಲಿ ಬಂದ ಡೆರಿಕ್ ಕ್ರಾಸ್ತಾ, ರೈಫಲ್‌ನಿಂದ ಐವನ್ ಅವರ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿ ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಕುಂದಾಪುರ ಚರ್ಚ್ ರಸ್ತೆ ಗುಂಡೇಟು ಕೊಲೆ ಪ್ರಕರಣದ ಆರೋಪಿ ಡೆರಿಕ್ ಕ್ರಾಸ್ತಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.

ಕುಂದಾಪುರ ಚರ್ಚ್ ರಸ್ತೆ ಗುಂಡಿಕ್ಕಿ ಕೊಲೆ ಪ್ರಕರಣದ ಆರೋಪಿ ಡೆರಿಕ್ ಕ್ರಾಸ್ತಾಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ: ಆರೋಪಿ ಡೆರಿಕ್ ಕ್ರಾಸ್ತಾ ಭಟ್ಕಳದಲ್ಲಿ ಬಂಧನ
ಇದನ್ನೂ ಓದಿ: ಉದ್ಯಮಿಗೆ ಗುಂಡಿಕ್ಕಿ ಭೀಕರ ಕೊಲೆ

ಕುಂದಾಪುರದಲ್ಲಿ ಹಣಕಾಸಿನ ವೈಷಮ್ಯದಿಂದ ಐವನ್ ರಿಚರ್ಡ್ ಎಂಬುವವರಿಗೆ ಗುಂಡಿಕ್ಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಡೆರಿಕ್ ಕ್ರಾಸ್ತಾನನ್ನು ಭಟ್ಕಳದಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರದ ಚರ್ಚ್ ರಸ್ತೆಯಲ್ಲಿ ಹಣಕಾಸಿನ ವೈಷಮ್ಯದಿಂದಾಗಿ ಉದ್ಯಮಿ ಐವನ್ ರಿಚಾರ್ಡ್ ಮಸ್ಕರೇನಸ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದ್ದು, ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆಗೆ 3 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
4 updates over 29 days
ಕುಂದಾಪುರದ ಚರ್ಚ್ ರಸ್ತೆಯಲ್ಲಿ ಹಣಕಾಸಿನ ವೈಷಮ್ಯದಿಂದಾಗಿ ಉದ್ಯಮಿ ಐವನ್ ರಿಚಾರ್ಡ್ ಮಸ್ಕರೇನಸ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದ್ದು, ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆಗೆ 3 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.